Coffe Borad - ಕಾಫಿ ಮಂಡಳಿಯಿಂದ ವಿವಿಧ ಸಹಾಯಧನಕ್ಕೆ ಅರ್ಜಿ ಆಹ್ವಾನ

Coffe Borad - ಕಾಫಿ ಮಂಡಳಿಯಿಂದ ವಿವಿಧ ಸಹಾಯಧನಕ್ಕೆ ಅರ್ಜಿ ಆಹ್ವಾನ

Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Sprinkler set Subsidy



PMKSY scheme: ಪ್ರತಿ ವರ್ಷದಂತೆ ಈ ವರ್ಷವು ಕೃಷಿ ಇಲಾಖೆಯಿಂದ ರೈತರಿಗೆ ಬೇಸಿಗೆ/ಹಿಂಗಾರು ಹಂಗಾಮಿನಲ್ಲಿ ಬೆಳೆಗಳಲ್ಲಿ ನೀರನ್ನು ಒದಗಿಸಲು ತುಂತುರು ನೀರಾವರಿ ಘಟಕ/ ಸ್ಪಿಂಕ್ಲರ್ ಸೆಟ್ ಅನ್ನು ಶೇ 90 ರಷ್ಟು ಸಹಾಯಧನದಲ್ಲಿ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆತ್ಮೀಯ ಕಾಫಿ ಬೆಳೆಗಾರರೇ ಕಾಪಿ ಮಂಡಳಿಯಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು. 2023-24 ನೆ ಸಾಲಿಗೆ ICDP- MTF ಯೋಜನೆ ಅಡಿಯಲ್ಲಿ ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಈ ಕೆಳಕಂಡ ಯೋಜನೆಗಳಿಗೆ ಸಹಾಯಧನ ನೀಡಲು ಅನುಮೋದನೆ ದೊರೆತಿದ್ದು ಅರ್ಹ ರೈತರಿಂದ ಈ ಕೆಳಗೆ ತಿಳಿಸಿರುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

Coffee board schemes-2023: ಯಾವೆಲ್ಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

  • ರಿಪ್ಲಾಂಟೇಶನ್ (ಮರುನಾಟಿ)- 25 ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ 15 ವರ್ಷ ಮೀರಿದ ಡ್ವಾರ್ಫ್ ಅರೇಬಿಕಾ ತಳಿಗಳು ಹಾಗೂ 40 ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ).
  • ಕೆರೆ, ತೆರೆದ ರಿಂಗ್ ಬಾವಿ, ನೀರಾವರಿ (ಸ್ಪಿಂಕ್ಲರ್/ ಡ್ರಿಪ್) ಉಪಕರಣಗಳು.
  • ಕಾಪಿ ಕಣ, ಗೊಡಾನ್ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರಿಗೆ ಮಾತ್ರ).

ಸಹಾಯಧನ ಪಡೆಯಲು ಬೇಕಾದ ಅರ್ಹತೆಗಳು :


25 ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು.
ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2013-14 ರಿಂದ ಕಾಫಿ ಮಂಡಳಿಯಿಂದ ಅರ್ಜಿ ಸಲ್ಲಿಸುವ ಕೆಲಸಕ್ಕೆ ಸಹಾಯಧನ ಪಡೆದಿರಬಾರದು.

ಮಹಿಳೆಯರಿಗೆ 30 ಸಾವಿರ ಉಚಿತ ಧನ ಶ್ರೀ ಯೋಜನೆ - Dhanashree Yojana


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:


• ಅರ್ಜಿ (ಕಾಫಿ ಮಂಡಳಿಯ ಕಛೇರಿಯಲ್ಲಿ ಲಭ್ಯ) ಅಥವಾ www.indiacoffee.org ವೆಬ್ ಸೈಟ್ ನೋಡಬಹುದು
• ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೊ
   ಆಧಾರ್ ಪ್ರತಿ
   ಬ್ಯಾಂಕ್ ಪಾಸ್ ಬುಕ್ ಪ್ರತಿ.
• ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ
• ಪಹಣಿಗಳು (RTC)
ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ • ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ
ಕೆರೆ, ಬಾವಿ ತಗಲುವ ಅಂದಾಜು ವೆಚ್ಚ ಹಾಗೂ ಪ್ಲಾನ್
ಸ್ಪಿಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು