ಮಹಿಳೆಯರಿಗೆ 30 ಸಾವಿರ ಉಚಿತ ಧನ ಶ್ರೀ ಯೋಜನೆ - Dhanashree Yojana

ಮಹಿಳೆಯರಿಗೆ 30 ಸಾವಿರ ಉಚಿತ ಧನ ಶ್ರೀ ಯೋಜನೆ - Dhanashree Yojana

Dhanashree Yojana Karnataka


ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (governmentguarantee schemes) ಜಾರಿಗೆ ತಂದು ರಾಜ್ಯದ ಜನತೆಯ ಮನಸ್ಸು ಗೆದ್ದಿದೆ. ಆದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ರಾಜ್ಯದಲ್ಲಿ ವಾಸಿಸುವ ಬಡ ಮಹಿಳೆಯರಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಇನ್ನು ಹಲವು ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಸಿಗುವ ಧನಶ್ರೀ ಯೋಜನೆ ಲಾಭವು ಕೂಡ ಒಂದು

ಉದ್ಯೋಗಿನಿ ಯೋಜನೆ ( Udyogini Yojana )

ಸ್ವಂತ ಉದ್ಯೋಗ (own business) ಮಾಡಲು ಬಯಸುವ ಮಹಿಳೆಯರು 18 ವರ್ಷ ಮೇಲ್ಪಟ್ಟ ಹಾಗೂ 55 ವರ್ಷ ವಯಸ್ಸಿನ ಒಳಗಿನ ಯಾವುದೇ ಮಹಿಳೆ ಉದ್ಯೋಗಿನಿಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಬಹುದು. ಯಾರಿಗೆ ಎಷ್ಟು ಸಹಾಯಧನಸಿಗುತ್ತದೆ ಹಾಗೂ ಯೋಜನೆಗಳ ಪ್ರಯೋಜನ ಯಾರಿಗೆ ಸಿಗುತ್ತದೆ ಎಂದು ತಿಳಿಯೋಣ.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಹಿಳೆಯರು ಸ್ವ ಉದ್ಯೋಗ ಆರಂಭಿಸಲು ಒಂದರಿಂದ ಮೂರು ಲಕ್ಷ ರೂಪಾಯಿಗಳ ವರೆಗೆ ಸಹಾಯಧನ (Subsidy Loan)ಪಡೆಯಬಹುದು. ಇದರಲ್ಲಿ ಶೇಕಡ 50% ನಷ್ಟು ಸರ್ಕಾರವೇ ಭರಿಸುತ್ತದೆ ಇನ್ನು 50% ಫಲಾನುಭವಿ ಮಹಿಳೆಯರು ಸಾಲದ (Loan) ರೂಪದಲ್ಲಿ ಪಡೆದುಕೊಳ್ಳಬೇಕು. ಯೋಜನೆಯ ಲಾಭ ಪಡೆದುಕೊಳ್ಳುವ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇರಬೇಕು.

ಇನ್ನು ಎರಡನೆಯದಾಗಿ ಸಾಮಾನ್ಯ ಮಹಿಳೆಯರು ಘಟಕ ವೆಚ್ಚವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು ಇಲ್ಲಿ 30% ನಷ್ಟು ಮಾತ್ರ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಸಾಮಾನ್ಯ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು.

ಚೇತನ ಯೋಜನೆ ( Chethana Yojana )


ಯೋಜನೆಯಡಿಯಲ್ಲಿ ಮಹಿಳೆ ವಿಕಲಚೇತನರಾಗಿದ್ದರೆ 33,000 ರೂಪಾಯಿಗಳನ್ನು ಉಚಿತವಾಗಿ ಪಡೆಯಬಹುದು. ಒಂದು ವರ್ಷ ಮೇಲ್ಪಟ್ಟ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು.

ಧನಶ್ರೀ ಯೋಜನ (Dhanashree Yojana)


ಸ್ವ ಉದ್ಯೋಗ ಆರಂಭಿಸಲು ಮಹಿಳೆಯರಿಗೆ 30,000 ರೂ. ಸಹಾಯಧನವನ್ನು ಧನಶ್ರೀ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. 18 ವರ್ಷದ ದಾಟಿದ ಹಾಗೂ 60 ವರ್ಷ ಮೀರದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯ ಅಡಿಯಲ್ಲಿಯೂ ಕೂಡ ಮಹಿಳೆಯರಿಗೆ ತಲಾ ರೂ.30,000ಗಳು ಸಹಾಯಧನವನ್ನು ಸರ್ಕಾರ ನೀಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು