Gruhalakshmi Yojana Praja prathinidhi Online ಪ್ರಜಾಪ್ರತಿನಿಧಿ ಅರ್ಜಿ

Gruhalakshmi Yojana Praja prathinidhi Online ಪ್ರಜಾಪ್ರತಿನಿಧಿ ಅರ್ಜಿ

Gruhalakshmi Yojana Praja prathinidhi Online ಪ್ರಜಾಪ್ರತಿನಿಧಿ ಅರ್ಜಿ


    ಪ್ರಜಾ ಪ್ರತಿನಿಧಿಯನ್ನು ನೇಮಿಸಿ, ಮನೆಮನೆಗೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿತ್ತು. ಫಲಾನುಭವಿಯ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಪ್ರಜಾ ಪ್ರತಿನಿಧಿಗಳಾಗುವ ಆಸಕ್ತರಿಗೂ ಗೌರವಧನ ನೀಡುತ್ತಿಲ್ಲ. ಪುಕ್ಕಟೆಯಾಗಿ ಕೆಲಸ ಮಾಡಲು ಯಾರೂ ಇಚ್ಛಿಸುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.ಯೋಜನೆ ನೋಂದಣಿ ಬಗ್ಗೆ ಮಾಹಿತಿ ನೀಡುವವರು ಇಲ್ಲದ್ದರಿಂದ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ನೂಕು ನುಗ್ಗಲು ಉಂಟಾಗುತ್ತಿದೆ. ಯಾರನ್ನು ಸಂಪರ್ಕಿಸಿ ದರೆ ಪರಿಹಾರದೊರೆಯಲಿದೆ ಎಂಬ ಮಾಹಿತಿ ಕೊರತೆಯೂ ಜನರಲ್ಲಿದೆ.


Aadhar Ration Card Link Online: ಆಧಾರ್‌ ಜೊತೆ ರೇಷನ್‌ ಕಾರ್ಡ್‌ ಲಿಂಕ್‌ ಮಾಡಲೇ ಬೇಕು ಏಕೆ ?


ಮಳೆ, ಸರ್ವರ್ ಬ್ಯುಸಿ, ವಿದ್ಯುತ್ ಕಡಿತ, ಮೊಬೈಲ್‌ಗಳಿಗೆ ಬಾರದ ಮೆಸೇಜ್, ಆಧಾರ್‌ ಕಾರ್ಡ್‌ಗೆ ಪ್ಯಾನ್ ಲಿಂಕ್ ಆಗದಿರುವಂತಹ ಹಲವು ಸಮಸ್ಯೆಗಳಿಂದಾಗಿ ಫಲಾನುಭವಿ ಮಹಿಳೆಯರು ಕಷ್ಟಪಡುತ್ತಿದ್ದಾರೆ.ಪಡಿತರ ಕಾರ್ಡ್ ಹೊಂದಿರುವ ಮಹಿಳೆಯರೆಲ್ಲರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅರ್ಹರು. ಇದುವರೆಗೆ ಶೇ25ರಷ್ಟು ಮಹಿಳೆಯರ ನೋಂದಣಿ ಆಗಿದೆ. ನೋಂದಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳು,ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ನವೀನ್
ಮಾಹಿತಿ ನೀಡಿದರು.


ಗೃಹಲಕ್ಷ್ಮಿಯೋಜ ನೆಯ ಫಲಾನುಭವಿಗಳ ನೋಂದಣಿಗೆ ನೆರವಾಗಲು ಪ್ರಜಾಪ್ರತಿನಿಧಿಗಳನ್ನು ನೇಮಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಗೌರವಧನ ಸಿಗುವುದಿಲ್ಲ ಎಂಬ ಕಾರಣಕ್ಕೆ ಪ್ರಜಾಪ್ರತಿನಿಧಿಯಾಗಿ ಕೆಲಸ ಮಾಡಲು ಯಾರೂ ಆಸಕ್ತಿ ತಾಳದಿರು ವುದು ಸಮಸ್ಯೆ ಹೆಚ್ಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು